On this mother’s day Amma, what can I give you who has given her life to us? I may not tell you often how much you mean to me or how much I love you or how incomplete my life would be without you. Mere thanks will not be enough to thank you for all that you do for us day in and day out. If not for you, my world would not be same. Love you more and more. Every mom is a supermom to her kids. To me you are perfect in every way. You are a role model on how one independently makes their life crossing hurdles from childhood and be responsible. There is still so much to say but I don’t know how best to express it.

Here’s a small dedication to you from me, your daughter. Hope you like it Amma!

Happy Mother’s Day!!!

IMG_20180513_100201_935.jpgಓ ನನ್ನ ಮುದ್ದು ಅಮ್ಮ, ನಿನ್ನ ಬಗ್ಗೆ ನಿನಗಿಲ್ಲ ಕಾಳಜಿ. ಏನೇ ಹೇಳಲಿ ನಿನಗಿಲ್ಲ ಸರಿಸಾಟಿ

ಸದಾ ನಮ್ಮ ನೋವು ನಲಿವಿನ ತಲೆಬಿಸಿ ನಿನಗೆ, ಅದರ ಅರಿವಿಲ್ಲ ನಮ್ಮ ಲೈಫ್ ಅಲ್ಲಿ ನಮಗೆ

ನಿನ್ನ ಗದರಿಗೆ ನಾವ್ ಹೆದರಲ್ಲ, ನಿನ್ನ ಅಳುವಿಗೆ ನಾವ್ ಕರಗದೆ ಇರಲಾಗಲ್ಲ

ನಮ್ಮ ತಪ್ಪನು ಮನ್ನಿಸಿ, ಮುನಿದಾಗ ಓಲೈಸಿ, ಹಸಿದಾಗ ತಿನಿಸಿ, ಎಲ್ಲವೂ ಸರಿದೂಗಿಸುವ ಕಲೆಗಾತಿ ನೀ

ಏನೇ ಮಾಡಿದರೂ ಎಲ್ಲೇ ಹೋದರೂ, ಮನೆ ಮಕ್ಕಳು ಎಂದು ಕನವರಿಸಿ ತಳಮಳಿಸುವೆ

ನೀ ಇರುವಾಗ ನಿನ್ನ ಪ್ರಾಮುಖ್ಯತೆ ತಿಳಿಯದ ನಾವು, ನೀ ದೂರಾದ ಕ್ಷಣವೇ ನಮ್ಮನ್ನೇ ದೂರುವೆವು ನಾವು

 

ಓ ನನ್ನ ಮುದ್ದು ಅಮ್ಮ, ನಿನಗಾಗಿಯಲ್ಲದಿದ್ದರೂ ನಮಗಾಗಿ ನಗು, ಎಲ್ಲಾ ನೋವು ಮರೆತು ನಗುತಾ ನಗಿಸುತ ಇರು

ನಾವ್ ನಿನಗೆ ಏನ ಮಾಡಿದರು ಸಾಲದು,ನಿನ್ನ ಋಣವ ಎಂದಿಗೂ ತೀರಿಸಲಾಗದು

ಯಾರ ಪ್ರೀತಿ ಸಿಗಲಿ ಬಿಡಲಿ ನಿನ್ನ ಪ್ರೀತಿ ಸದಾ ಹಸಿರು, ಬೇಡದೆ ಸಿಗುವ ಜೀವಾಮೃತ ನೀನು

ಅಮೃತಧಾರೆ ನೀನು, ಅನ್ನಪೂರ್ಣೆ ನೀನು, ಮಮತಾಮಯಿ ನೀನು, ಕ್ಷಮಯಾಧರಿತ್ರಿ ನೀನು

ಕೊಡಲಾರೆವು ಬೆಳ್ಳಿ ಬಂಗಾರ ನಿನಗೇನನೂ, ಪ್ರೀತಿಯೊಂದೇ ಕೇಳುವೆ ನೀನು

ಸದಾ ಬಳಿಯಿರದಿದ್ದರೂ ಆಶ್ರಮಕ್ಕೆ ಅಟ್ಟದೆ ಮನೆಯಲ್ಲೇ ಪ್ರೀತಿಯಿಂದ ಇಟ್ಟರೆ ಅಷ್ಟೇ ಸಾಕೆನ್ನುವೆ ನೀನು

 

IMG_20170705_092102.jpg

ಓ ನನ್ನ ಮುದ್ದು ಅಮ್ಮ, ನಿನ್ನ ನಂಬಿಕೆಗೆ ಮಾಡಲ್ಲ ಮೋಸ, ದೂರಮಾಡೆವು ನಿನ್ನನು ನಾವು

ನೀನಿಲ್ಲದಿರೆ ಬಾಳಿಗಿಲ್ಲ ಅರ್ಥ, ಯಾರು ಮಾಡುವರು ನಿನ್ನಂತೆ ಪ್ರೀತಿಯ

ನಿನ್ನ ಅಪ್ಪುಗೆ, ಸಿಹಿ ಮುತ್ತಲಿ ಇರುವುದು ಗಮ್ಮತ್ತು, ನಿನ್ನ ಮಡಿಲಲ್ಲಿ ಸಿಗುವುದು ಸಂಪತ್ತು

ನಿನಗಿಲ್ಲದಿದ್ದರು ನಮಗಾಗಿ ಬಿಸಿಲಲ್ಲಿ ಸುತ್ತಿ ಹೊಟ್ಟೆ ತಂಪಗಾಗಿ ಇಟ್ಟೆ ನೀನು

ಎಲ್ಲ ಹಬ್ಬಕೂ ಹೊಸಬಟ್ಟೆ ಹೊಲಿದಿಟ್ಟೆ ನೀನು, ನಮಗಾಗಿ ನಿನ್ನೆಲ್ಲಾ ಆಸೆ ಬಿಟ್ಟೆ ನೀನು

ನೀ ತೋರಿದಾ ವಾತ್ಸಲ್ಯಕಿಲ್ಲಾ ಬೆಲೆ. ನಿನ್ನಹಾಗೆ ಅಲ್ಲದಿದ್ದರೂ ನಿನ್ನಂತೆಯೇ ಇರಲು ಪ್ರಯತ್ನ ನಡೆವುದು ಎಂದಿಗೂ

 

ಓ ನನ್ನ ಮುದ್ದು ಅಮ್ಮ,

ನೀನೇ ಎಲ್ಲಾ ನಿನ್ನಿಂದಲೇ ಎಲ್ಲಾ

ದೂರ ಹೋಗದಿರು ಬಿಟ್ಟು

ನೀನಿಲ್ಲದಿರೆ ತಿಳಿಯಲ್ಲ ಹೊತ್ತು

ಬೈಡುಬಿಡು ಸ್ವಲ್ಪ ಹೊತ್ತು

ಮಾತು ಬಿಡಬೇಡ ಯಾವತ್ತೂ

 

IMG20170414131909.jpg

ಓ ನನ್ನ ಮುದ್ದು ಅಮ್ಮ,

ನೀ ನಮ್ಮ ಸೇವಕಿಯಲ್ಲ

ನೀ ನಮ್ಮ ಮನೆಯ ನಂದಾದೀಪ

ಸಾಕು ಮಾಡು ತ್ಯಾಗವ

ಬದುಕು ನೀ ನಿನಗಾಗಿ

ಸಾಕು ನೀ ಅತ್ತಿದ್ದು ನಮಗಾಗಿ

 

ಅಮ್ಮ ಓ ನನ್ನ ಮುದ್ದು ಅಮ್ಮ!

 

– Your daughter